Congratulations Chandra Arya / ಶ್ರೀ ಚಂದ್ರ ಆರ್ಯ ಅವರಿಗೆ ಅಭಿನಂದನೆಗಳು

Congratulations Chandra Arya / ಶ್ರೀ ಚಂದ್ರ ಆರ್ಯ ಅವರಿಗೆ ಅಭಿನಂದನೆಗಳು

ಕೆನಡಾ ಸಂಸತ್ತಿನಲ್ಲಿ ನಮ್ಮೆಲ್ಲರ ಮಾತೃಭಾಷೆ ಕನ್ನಡದಲ್ಲಿ ಸುಮಧುರವಾಗಿ ಮಾತನಾಡಿದ ಕೆನಡಾ ಸಂಸತ್ತಿನ ಸದಸ್ಯರಾದ ಮಾನ್ಯ ಶ್ರೀ ಚಂದ್ರ ಆರ್ಯ ಅವರಿಗೆ ಒಟ್ಟಾವಾ ಕನ್ನಡಿಗರಿಂದ ಧನ್ಯವಾದಗಳು ಹಾಗೂ ಹೃತ್ಪೂರ್ವಕ ಅಭಿನಂದನೆಗಳು.🙏

 

Our heartfelt congratulations and best wishes to 'The Member of Parliament, Canada' Shri Chandra Arya Sir for delivering a speech in the Parliament of Canada in our own Kannada language. Here is an excerpt from the speech:

 

ಮಾನ್ಯ ಸಭಾಪತಿ,ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ.ಭಾರತದ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು ಸುಮಾರು ಐದು ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ.ಕೆನಡಾ ದೇಶದ ಕನ್ನಡಿಗರು ೨೦೧೮ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ. ರಾಜಕುಮಾರ್ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತಿದ್ದೇನೆ. ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.

ಧನ್ಯವಾದಗಳು ಸಭಾಪತಿ.

Back to blog